ಮುಂದಿನ ಜನವರಿಗೆ 17ಕ್ಕೆ ಒಂದ್ ವರ್ಷವಾಗ್ತದೆ ಬಾಗಲಕೋಟೆಗೆ ಬಂದು. ರಿಪೋರ್ಟರ್ ಆಗ್ಬೇಕು. ಬರೀ ಡೆಸ್ಕು, ಟ್ರಾನ್ಸಲೇಷನ್, ಪೇಜ್ ಡಿಸೈನ್ ಗೆ ನಾನು ಸಿಮೀತ ಆಗಬಾರದು ಎನ್ನುವ ಒಂದೇ ಉದ್ದೇಶದಿಂದ ಕೈಗೆ ಸಿಕ್ಕ ಅವಕಾಶವನ್ನು ಅನಾಮತ್ತಾಗಿ ಬಾಚಿಕೊಂಡು ಹದಿನೈದು ದಿನದಲ್ಲಿ ಬಾಗಲಕೋಟೆಗೆ ಬಂದ್ ಬಿಟ್ಟೆ.
ಜನವರಿಯಲ್ಲಿ ಎಂಥಾ ಹುರುಪು ಇತ್ತು ಗೊತ್ತಾ? ನಾನು ನನ್ನ ಪ್ಯಾಷನ್ ಪ್ರೊ ಬೈಕು ಬಾಗಲಕೋಟೆಯ ಅರ್ಧ ಜಿಲ್ಲೆಯನ್ನು ಸುತ್ತಿಯಾಗಿದೆ. ಕೊಪ್ಪಳ ಜಿಲ್ಲೆಯ ಗಡಿ ಕೂಡ ಮುಟ್ಟಿ ಬಂದದ್ದು ಕೂಡ ಸಾಹಸ. ಫ್ಲೊರೈಡ್ ಕುರಿತು ಸ್ಟೋರಿ ಮಾಡ್ಬೇಕಾದ ಸಂದರ್ಭದಲ್ಲಿ ಮೂನ್ನೂರು ಕಿ. ಮೀ. ಬೈಕ್ ಮೇಲೆ ಸುತ್ತಿದೆ. ಬೈಕು ಹೊಸತು. ನನಗೂ ರಿಪೋರ್ಟಿಂಗ್ ಹೊಸತು. ಸುತ್ತಿದ್ದೆ ಸುತ್ತಿದ್ದೆ. ನಂದವಾಡಗಿ. ಬೆಣಕನಡೋಣಿ, ವಜ್ಜಲ, ಕಂದಗಲ್ ಒಂದೇ ದಿನ ಹತ್ತೂರು ಸುತ್ತಿದ್ದೆ. ಅದಾದ ಮೇಲೆ ಮಹಾಲಿಂಗಪುರದತ್ತ ಬೈಕ್ ಪಯಣ, ಬೈಕ್ ಮೇಲಿನಿಂದ ನಾನು ಮನೋಜ್ ಬಿದ್ದು ಕಾಲು ಮುರಕೊಂಡು ಬಂದಿದ್ದು ಅದೇ ದಿನ.
ಅದಾಗಿ ಈಗ ಆರು ತಿಂಗಳು ಸರಿದಿವೆ ಬೈಕ್ ಸಹವಾಸ ಸಾಕಾಗಿದೆ. ಮೊನ್ನೆ ಗಣೇಶೋತ್ಸವಕ್ಕೆ ಬೆಳಗಾವಿಗೆ ಬಸ್ ನಲ್ಲೇ ಹೋಗಿ ನಾಲ್ಕು ಗಂಟೆ ಬಸ್ ನಲ್ಲಿ ಕೂರಬೇಕಾದರೆ ಜೀವ ಅರ್ಧಕ್ಕೆ ಬಂದಂಗೆ ಆಗ್ತಿತ್ತು. ನೂರೈವತ್ತು ಕಿ.ಮೀಗೆ ನಾಲ್ಕು ಗಂಟೆ ಪಯಣದ ಶಿಕ್ಷೆ . ಬೈಕ್ ನಲ್ಲಿ ಹೊದರೆ ಹೆಚ್ಚೆಂದರೆ ಎರಡೂವರೆ ಗಂಟೆ.
ಉದಯವಾಣಿ ಸೇರಿದಾಗಿನಿಂದ ರಿಪೋರ್ಟಿಂಗ್ ಅನುಭವ ಬೇರೆನೆ ಇದೆ. ಏನೋ ಒಂಥರಾ..... ಡೆಸ್ಕ್ ನಲ್ಲಿದ್ದಾಗ ರಿಪೋರ್ಟರ್ ಮೇಲೆ ನಾವು ಮಾಡುತ್ತಿದ್ದ ದಬ್ಬಾಳಿಕೆ ಮತ್ತು ರಿಪೋರ್ಟರುಗಳು ಅನುಭವಿಸುವ ಪರಿಸ್ಥಿತಿ ಎರಡರ ಅನುಭವ ಒಂದಾದ ಮೇಲೆ ಒಂದು. ಯಾರಿಗುಂಟು ಯಾರಿಗಿಲ್ಲ
Saturday, September 3, 2011
Subscribe to:
Posts (Atom)